Simple Cooking Tips, Simple Cooking Style at Home, ಮನೆಯಲ್ಲೀ ಸರಳವಾಗಿ ಅಡುಗೆ ಮಾಡಿಕೊಳ್ಳುವ ವಿಧಾನಗಳು, ಗೊಜ್ಜು,ಎಣ್ಣೆಗಾಯಿ,ಬೇಳೆ ಚಟ್ಟಿ,ವಾಂಗೀಭಾತ್

simple cooking tips ,simple cooking at home easily ಮನೆಯಲ್ಲೀ ಸರಳವಾಗಿ ಅಡುಗೆ ಮಾಡಿಕೊಳ್ಳುವ  ವಿಧಾನಗಳು, ಗೊಜ್ಜು,ಎಣ್ಣೆಗಾಯಿ,ಬೇಳೆ ಚಟ್ಟಿ,ವಾಂಗೀಭಾತ್


"ಯಾರೂ ದೊಡ್ಡ ಅಡುಗೆಯವರಾಗಿ ಹುಟ್ಟುವುದಿಲ್ಲ,
 ಒಬ್ಬರು ಮಾಡುವ ಮೂಲಕ ಕಲಿಯುತ್ತಾರೆ."




 ಗೊಜ್ಜು



                                    ಕಾಲು ಕೆ.ಜಿ ಈರುಳ್ಳಿ, ಸಣ್ಣಗೆ ಹೆಚ್ಚಿ, ಹಸೀಮೆಣಸಿನಕಾಯಿ ಉದ್ದಕ್ಕೆ ಸೀಳಿ, ಕೊತ್ತಂಬರಿಸೊಪ್ಪು, ಕರಬೇವು, ಇಂಗು ಸಾಸುವೆ, ವಾಸನೆಗೆ 2 ಒಣಮೆಣಸಿನಕಾಯಿ ಎಲ್ಲವನ್ನು ಬಾಂಡ್ಲಿಗೆ ಅರ್ಧ ಚಟಾಕು ಎಣ್ಣೆ ಬಿಟ್ಟು ಸಾಸುವೆ ಚಟಪಟ ಅಂದ ಮೇಲೆ ಈರುಳ್ಳಿ ಹೆಚ್ಚಿದ್ದನ್ನು ಹಾಕಿ ಕೈಯಾಡಬೇಕು. ಬ್ರೌನ್ ಕಲರ್‌ಗೆ ಬಂದ ಮೇಲೆ ಹುಣಿಸೇಹಣ್ಣನ್ನು ಒಂದು ನಿಂಬೆ ಗಾತ್ರ ಕಿವಿಚಿ, ಮುಕ್ಕಾಲು ಪಾವು ನೀರು ಅಳತೆಗೆ ಹಾಕಿ ಉಪ್ಪು ಮಾಮೂಲು ಮೊಳಕಾಯಿ (ಮೆಣಸಿನಕಾಯಿ) ಪುಡಿ 2 ಟೀ ಸ್ಪೂನ್, 1 ಚಮಚ ಉಪ್ಪು, 1 ನಿಂಬೆ ಗಾತ್ರ ಬೆಲ್ಲ ಹಾಕಿ ಕುದಿದ ನಂತರ ಇನ್ನೊಂದು ಕಡೆಯಲ್ಲಿ ಅರ್ಧ ಚಮಚ ಕಡಲೇಬೇಳೆ, ಉದ್ದಿನಬೇಳೆ ಕಾಲು ಚಮಚ, ಮೆಂತ್ಯ, ಜೀರಿಗೆ ಹುರಿದು ಕುಟ್ಟಿ ಈ ಗೊಜ್ಜಿಗೆ ಹಾಕಿ ಕೆಳಕ್ಕೆ ಇರಿಸಬೇಕು. ಪುಡಿ ಹಾಕುವುದಕ್ಕೆ ಮುಂಚೆ ಕಾಯಿ ಬೆಂದಿರಬೇಕು. ಆಗ ಪುಡಿ ಹಾಕಿ ಇಡಬೇಕು.
ಹೀಗೆ ಹೆರಳೆಕಾಯಿ, ಹಾಗಲಕಾಯಿ ಮತ್ತು ಬೆಂಡೆಕಾಯಿಯಲ್ಲೂ ಮಾಡಬಹುದು.

ಹೆರಳೆಕಾಯಿ ಗೊಜ್ಜು ಹಾಗಲಕಾಯಿ ಗೊಜ್ಜಿಗೆ ಬೆಲ್ಲಹುಣಸೇಹಣ್ಣು ಕೊಂಚ ಜಾಸ್ತಿಹಾಕಬೇಕು. 

ಬೆಂಡೇಕಾಯಿ ಹಾಗೂ ಈರುಳ್ಳಿ ಗೊಜ್ಜಿಗೆ ಹೆಚ್ಚಿಗೆ ಬೆಲ್ಲವನ್ನು ಹಾಕಬಾರದು.


ಎಣ್ಣೆಗಾಯಿ



                        ಅರ್ಧ ಕೆ.ಜಿ ಬದನೆಕಾಯಿ, ಆಲೂಗಡೆ ಹೆಚ್ಚಿ, ಬಾಂಡ್ಲಿಗೆ 1 ಚಮಚ ಎಣ್ಣೆ ಬಿಟ್ಟು, ಸಾಸುವೆ, ಒಣಮೆಣಸಿನಕಾಯಿ, 1 ಚಮಚ ಕಡಲೆಬೇಳೆ, 1 ಚಮಚ ಉದ್ದಿನಬೇಳೆ ಒಗ್ಗರಣೆ ಹಾಕಿ, ಬ್ರೌನ್ ಕಲರ್‌ಗೆ ಕಡಲೇಬೇಳೆ ಆದ ನಂತರ ಆಗಾಗ್ಗೆ ಕೈಯಾಡಿ 1 ನಿಂಬೆ ಗಾತ್ರ ಹುಣಸೇಹಣ್ಣನ್ನು ಚೆನ್ನಾಗಿ ಕಿವಿಚಿ ಬಾಂಡ್ಲಿಗೆ ಹಾಕಿ ಸಣ್ಣಗೆ ಕುದಿ ಬರಲಿ, ಇನ್ನೊಂದು ಕಡೆ ಮುಕ್ಕಾಲು ಚಟಾಕು ಧನಿಯ 1 ಟೇಬಲ್ ಸ್ಪೂನ್ ಕಡೆಲೆಬೇಳೆ, ಉದ್ದಿನಬೇಳೆ 1 ಟೇಬಲ್‌ಸ್ಪೂನ್, 6 ಒಣಮೆಣಸಿನಕಾಯಿ ಎಲ್ಲಾ ಬೇರೆಬೇರೆ ಹುರಿದು, 1 ಬಟ್ಟು ಕೊಬ್ರಿ ತುರಿದು ಈ ಪುಡಿ ಜೊತೆಯಲ್ಲಿ ಚೆನ್ನಾಗಿ ಕುಟ್ಟಿ ಈ ತರಕಾರಿಗೆ ಹಾಕಿ ಮುಚ್ಚಿ 1 ನಿಮಿಷದ ನಂತರ ಕೆಳಗೆ ಇಡಬೇಕು.

ಇದೇ ಎಣ್ಣೆಗಾಯಿ - 


ಬೇಳೆ ಚಟ್ಟಿ




                           ಬಾಂಡ್ಲಿಗೆ 1 ಟೇಬಲ್‌ಸ್ಪೂನ್ ಎಣ್ಣೆಹಾಕಿ, ಸಾಸುವೆ, ಹಸೀಮೆಣಸಿನಕಾಯಿ ಅರ್ಧ ಅರ್ಧ ಮಾಡಿಕೊಂಡು ಅರ್ಧ ಚಟಾಕು ಕಡಲೆಬೇಳೆ ನಂತರ ಉದ್ದಿನಬೇಳೆ ಅರ್ಧ ಚಟಾಕು ಎಲ್ಲಾ ಒಗ್ಗರಣೆ ಕೊಟ್ಟು ಹುರಿದು ಇಂಗು ಹಾಕಿ ಬ್ರೌನ್ ಕಲರ್‌ಗೆ ಆದ ನಂತರ ಒರಳಲ್ಲಿ ಹಾಕಿ 1 ಹೋಳು ತೆಂಗಿನಕಾಯಿ ತುರಿದು ಉಪ್ಪು ಕೊತ್ತಂಬರಿಸೊಪ್ಪು, ಹುಣಸೇಹಣ್ಣು ಹಾಕಿ ರುಬ್ಬಬೇಕು.

ಇದೇ ಬೇಳೆ ಚಟ್ಟಿ.

ವಾಂಗೀಭಾತ್



                                  1 ಪಾವು ಅನ್ನ ಉದುರಾಗಿ ಮಾಡಿಕೊಂಡು, / ಕೆ.ಜಿ ಬದನೆಕಾಯಿ ಉದ್ದುದ್ದವಾಗಿ ತೆಳ್ಳಗೆ ಹೆಚ್ಚಿ ಒಂದು ಬಾಂಡ್ಲಿಯಲ್ಲಿ 1 ಚಟಾಕು ಎಣ್ಣೆ, 1 ಟೇಬಲ್ ಚಮಚ ತುಪ್ಪ ಹಾಕಿ, ಸಾಸುವೆ, ಒಣಮೆಣಸಿನಕಾಯಿ 4, ಕರಬೇವು ಒಗ್ಗರಣೆ ಕೊಟ್ಟ ನಂತರ ಬದನೇಕಾಯಿ ಹಾಕಿ ಅರ್ಧ ಬೆಂದ ಮೇಲೆ 1 ಚಮಚ ಉಪ್ಪು ಹಾಕಿ ಮುಚ್ಚಿಡಬೇಕು. ಎಲ್ಲಾ ಬೆಂದ ಮೇಲೆ ಅನ್ನದ ತಲೆಯ ಮೇಲೆ ಯಥಾ ಪ್ರಕಾರ ವೆಜಿಟಬಲ್ ಭಾತ್ ಪುಡಿಯನ್ನು ಹಾಕಿ 5-6 ನಿಂಬೇಹಣ್ಣಿನ ರಸ ಹಾಕಬೇಕು. ಹೀಗೆ ರವೆಯಲ್ಲೂ ಬರೀ ಬದನೆಕಾಯಿ ಹಾಕಿ ಮಾಡಬಹುದು – ಇದೇ ವಾಂಗೀಬಾತ್.


 

Previous Post Next Post

Contact Form