Simple kitchen recipes in kannada. ಮನೆಯಲ್ಲೀ ಸರಳವಾಗಿ ಅಡುಗೆ ಮಾಡಿಕೊಳ್ಳುವ ವಿಧಾನಗಳು
ಇಂದು ಅಡುಗೆ ಪ್ರಾರಂಭಿಸಿ!
ನೀವು ಅದನ್ನು ಮಾಡಬಹುದು!
ಪುಳಿಯೋಗರೆ
ಅರ್ಧ ಸೇರು ಅನ್ನ ಉದುರಾಗಿ ಮಾಡಿಕೊಂಡು ಒಂದು ಬೇಸಿನ್‌ಗೆ ಹಾಕಬೇಕು.
ಗೊಜ್ಜು ಮಾಡುವ ಕ್ರಮ - 1
ಹೆರಳೆಕಾಯಿ ಗಾತ್ರದ ಹುಣಿಸೆಹಣ್ಣು ಬಿಸಿ. ನೀರಿನಲ್ಲಿ ನೆನೆಸಿ ಚೆನ್ನಾಗಿ ಕಿವಿಚಿದರೆ 1 ಪಾವು ನೀರು ಆಗಬೇಕು. ನಂತರ | ಬಾಂಡ್ಲಿಯಲ್ಲಿ 1 ಚಟಾಕು ಎಣ್ಣೆ ಬಿಟ್ಟು ಒಗ್ಗರಣೆ ಸಾಸುವೆ, ಇಂಗು, 4 ಮೆಣಸಿನಕಾಯಿ ಕರುಬೇವು ಹಾಕಿ ಒಗ್ಗರಣೆ ಆದ ಮೇಲೆ ಈ ಹುಣಸೇ ಹಣ್ಣಿನ ನೀರನ್ನು ಬಾಂಡ್ಲಿಗೆ ಬಿಡಬೇಕು. ಅದು ಕುದಿಯುತ್ತಾ ಇರುತ್ತೆ. ಇನ್ನೊಂದು ಕಡೆ ಮೇಲುಪುಡಿ ಎಂದು - 1 ಚಟಾಕು ಧನಿಯ, 1 ಟೀ ಸ್ಪೂನ್ ಮೊಳಗು (ಮೆಣಸು) ಅರ್ಧ ಟೀ ಸ್ಪೂನ್ ಜೀರಿಗೆ, ಮೆಂತ್ಯ ಇಂಗು ಎಲ್ಲಾ ಹುರಿದು 2 ಒಣಮೆಣಸಿನಕಾಯಿ ಹುರಿದುಕೊಂಡು ಕುಟ್ಟಿ ಅನ್ನದ ಮೇಲೆ ಹಾಕಿ, ಕೊಂಚ ಅರಿಶಿನಪುಡಿ ಇಟ್ಟುಕೊಂಡು 1'/ ಚಟಾಕು ಎಳ್ಳು ಘಂ ಎಂದು ಹುರಿದು ಕುಟ್ಟಿ ಅದನ್ನು ಅನ್ನದ ಮೇಲೆ ಹಾಕಿ ಕೊಂಚ ಪುಡಿ ಇಟ್ಟುಕೊಂಡು ಇರಬೇಕು. ಆ ಕಡೆ ಗೊಜ್ಜಿಗೆ 1 ನಿಂಬೆ ಗಾತ್ರ ಬೆಲ್ಲ ಹಾಕಿ, ಕೆಲಸಿ ನಂತರ ನಿತ್ಯ ಸಾರಿನ ಪುಡಿ ಒಂದೂವರೆ ಚಟಾಕು ಪುಡಿ ಹಾಕಿ ಕಲಸಿ 1 ನಿಮಿಷ ಬಿಟ್ಟು ಕೆಳಕ್ಕೆ ಇಟ್ಟುಕೊಂಡು ಅದರಲ್ಲಿ ಅರ್ಧ ಗೊಜ್ಜು ಅನ್ನದ ತಲೆಯ ಮೇಲೆ ಹಾಕಿ ಕಲಕಬೇಕು. ಬಾಂಡ್ಲಿಯಲ್ಲಿ ಅರ್ಧ ಪಾವು ಎಣ್ಣೆ ಬಿಟ್ಟು ಅದರಲ್ಲಿ ಮುಂಚೆ ಸ್ವಲ್ಪ ಬಿಟ್ಟು ಸಾಸುವೆ, 4 ಮೆಣಸಿನಕಾಯಿ, ಇಂಗು, ಕರಬೇವು ಒಗ್ಗರಣೆ ಕೊಟ್ಟು ಅನ್ನದ ಮೇಲೆ ಹಾಕಿ, ಬಾಕಿ ಎಣ್ಣೆ ಬಿಟ್ಟು ಶುಂಡಲ್‌ಕಡಲೆ ಅರ್ಧ ಚಟಾಕು, 1 ಚಟಾಕು ಕಡಲೆಕಾಯಿ ಬೀಜವನ್ನು ಒಂದು ಹದವಾಗಿ ಕರಿದು ಕೆಳಕ್ಕೆ ಇರಿಸಿಕೊಂಡು 1 ದೊಡ್ಡ ಬಟ್ಟು ಕೊಬ್ರಿ ತುರಿದು ಈ ಕಡಲೆಕಾಯಿಯ ಜೊತೆಯಲ್ಲಿ ಕೊಂಚ ಕರಿದು, ಅನ್ನದ ತಲೆಯ ಮೇಲೆ ಹಾಕಿ ಪುಳಿಯೊಗರೆ ಕಲೆಸಬೇಕು.
ಇದು ಅಯ್ಯಂಗಾರ್ ಮೇಲುಕೋಟೆ ಪುಳಿಯೋಗರೆ.
ಅವಕಾಶ ಇದ್ದರೆ ಉದ್ದಕ್ಕೆ ತೆಳ್ಳಗೆ ಕೊಬ್ರಿ, ಗೋಡಂಬಿ ಕರಿದು ಮೇಲುಕೋಟೆ ತರಹ ಮಾಡಬಹುದು, ಚೆನ್ನಾಗಿರುತ್ತೆ
ಬಾಕಿ ಪುಡಿಯನ್ನು ಮಿಕ್ಕ ಗೊಜ್ಜಿಗೆ ಹಾಕಿ ಇಟ್ಟುಕೊಂಡು ಮಿಕ್ಕ ದಿನದಲ್ಲಿ ಅನ್ನಕ್ಕೆ ಆಗುತ್ತೆ.
ಕಡುಗೋಗರೆ
ಪಾವು ಅನ್ನ ಉದುರಾಗಿ ಮಾಡಿಕೊಂಡು 1 ಹೋಳು ತೆಂಗಿನಕಾಯಿ, 4 ಮೆಣಸಿನಕಾಯಿ ಅಥವಾ ಮಿಲ್‌ನಲ್ಲಿ ಒಣಮೆಣಸಿನಕಾಯಿ ಪುಡಿ ಮಾಡಿಕೊಂಡಿದ್ದರೆ 1 ಟೀ ಸ್ಪೂನ್ ಪುಡಿ (ಯಾತಕ್ಕೆಂದರೆ ರುಬ್ಬುವಾಗ ನೀರು ಬಿಡುವ ಹಾಗಿಲ್ಲ. ಬಿಡದೆ ಹೋದರೆ ಮೆಣಸಿನಕಾಯಿ ಸವೆಯುವುದಿಲ್ಲ. ಆದ್ದರಿಂದ ಪುಡಿ ಇದ್ದರೆ ಅನುಕೂಲ). 1 ನೆಲ್ಲಿಕಾಯಿ ಗಾತ್ರ ಹುಣಿಸೇಹಣ್ಣನ್ನು 1 ಟೇಬಲ್ ಸ್ಪೂನ್ ನೀರಿನಲ್ಲಿ ಮೊದಲೇ ನೆನೆಸಿ ಅದನ್ನು ತೆಂಗಿನಕಾಯಿ, ಅರ್ಧ ಚಮಚ ಸಾಸುವೆ 2 ಚಿಟಿಕೆ ಅರಿಶಿನ, 1 ಚಿಟಿಕೆ ಬೆಲ್ಲ ಹಾಕಿ ಚೆನ್ನಾಗಿ ರುಬ್ಬಿ ಗಟ್ಟಿಯಾಗಿ ಅನ್ನವನ್ನು ಈ ಖಾರದಲ್ಲಿ ಕಲಕಿ, ಉಪ್ಪು ಹಾಕಿ ಬಾಂಡ್ಲಿಯಲ್ಲಿ 1 ಚಟಾಕು ಎಣ್ಣೆ ಬಿಟ್ಟು ಅರ್ಧ ಚಮಚ ಸಾಸುವೆ, 4 ಮೆಣಸಿನಕಾಯಿ, /ಚಟಾಕು ಕಡಲೆಕಾಯಿ ಅಥವಾ ಶುಂಡಲ್ ಕಡಲೆ, ಒಗ್ಗರಣೆ ಕೊಟ್ಟು ಕರಬೇವು ಹಾಕಿ ಅನ್ನದ ಮೇಲೆ ಹಾಕಿ ಕಲಸಿ ಮುಚ್ಚಿಡಬೇಕು. ಕಡುಗೋಗರೆ.
ಕೇಸರಿ ಭಾತ್
1 ಪಾವು ಬನ್ನಿ ರವೆ ಹುರಿದು, ಒಂದೂವರೆ ಪಾವು ಹಾಲನ್ನು ಒಲೆ ಮೇಲೆ ಇಟ್ಟು, ಅರ್ಧ ಪಾವು ತುಪ್ಪ ಹಾಕಿ ಕುದಿ ಬಂದ ಮೇಲೆ ಈ ರವೆ ಹಾಕಿ ಸಣ್ಣ ಉರಿಯಲ್ಲಿ ಇಟ್ಟು ಇದ್ದರೆ 4 ಬಾದಾಮಿ ಸಿಪ್ಪೆ ತೆಗೆದು, ಹುರಿದು ಕಲಪತ್ತಿನಲ್ಲಿ ಕುಟ್ಟಿ ಪುಡಿ ಮಾಡಿ, ಈ ರವೆಯಲ್ಲಿ ಹಾಕಬೇಕು. ವಾಸನೆಯಾಗಿ, ಬಾದಾಮ್ ಹಲ್ವಾ ಹಾಗೆ ಆಗುತ್ತೆ ನಂತರ ಒಂದೂವರೆ ಪಾವು ಸಕ್ಕರೆಯನ್ನು ಈ ಬೆಂದ ರವೆಗೆ ಹಾಕಿ ಕಲಸಬೇಕು. ಕೊಂಚ ನೀರಾಗುತ್ತೇ ಸಕ್ಕರೆ ಹಾಕಿದ ಮೇಲೆ ಭಯ ಪಡಬಾರದು. ಪಕ್ವವಾಗಿ ಸಕ್ಕರೆ ಸೇರಿದ ಮೇಲೆ ಕೆಳಕ್ಕೆ ಇರಿಸಿ ತಕ್ಕಷ್ಟು ಗೋಡಂಬಿಯನ್ನು ತುಪ್ಪದಲ್ಲಿ ಕರಿದು, ದ್ರಾಕ್ಷಿಯನ್ನು ಸೇರಿಸಿ ಕಲಸಿಡಬೇಕು.
ಇದಕ್ಕೆ ಒಳ್ಳೆ ಕೇಸರಿ, ಯಾಲಕ್ಕಿ ಮತ್ತು ಚಿಟಿಕಿ ಪಚ್ಚ ಕರ್ಪೂರ ಎಲ್ಲಾ ಕುಟ್ಟಿ" ಹಾಕಬೇಕು. - ಇದೇ ಕೇಸರಿ ಭಾತ್.